Pages Menu
TwitterRssFacebook
Categories Menu

Posted by on Jan 27, 2019 in News | 0 comments

ಕಟೀಲು ದೇಗುಲದಲ್ಲಿ ಅಷ್ಟಬಂಧ ಪ್ರತಿಷ್ಟಾಪುರಸ್ಸರ ತೋರಣ ಮುಹೂರ್ತ

ಕಟೀಲು ದೇಗುಲದಲ್ಲಿ ಅಷ್ಟಬಂಧ ಪ್ರತಿಷ್ಟಾಪುರಸ್ಸರ ತೋರಣ ಮುಹೂರ್ತ

 ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ತಾ.೨೫ರಂದು ನಡೆಯಲಿರುವ ಅಷ್ಟಬಂಧ ಹಾಗೂ ತಾ.೨೮ರಂದು ನಡೆಯಲಿರುವ ಕಲಶಾಭಿಷೇಕದ ಪೂರ್ವಭಾವಿಯಾಗಿ ಬುಧವಾರ ಸಾಮೂಹಿಕ ಪ್ರಾರ್ಥನೆ, ತೋರಣ ಸ್ಥಾಪನೆ, ಮುಹೂರ್ತ, ಕದಿರೆ ಮರದಿಂದ ಮಾಡಿದ ಅರಣಿಯಿಂದ ಅಶ್ವತ್ಥದ ಕೆತ್ತೆಯನ್ನಿಟ್ಟು ಮಥನದ ಮೂಲಕ ಅಗ್ನಿಸೃಷ್ಟಿಯನ್ನು ಮಾಡಲಾಯಿತು. ಶ್ರೀ ದೇವರ ಮುಖರಂಗ ಮತ್ತು ಬಲಿ ಮೂರ್ತಿಗೆ ಅಗ್ನಿ ಉತ್ಥಾರಣ ಮಾಡಲಾಯಿತು.
ಅರಣಿ ಮಥನ, ನೂರೆಂಟು ತೆಂಗಿನಕಾಯಿ ಗಣಯಾಗಗಳು ವೇದವ್ಯಾಸ ತಂತ್ರಿ, ಕೃಷ್ಣರಾಜ ತಂತ್ರಿಗಳ ಸಹಯೋಗದಲ್ಲಿ ನಡೆಯಿತು.
ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಕೊಡೆತ್ತೂರುಗುತ್ತು ಸನತ್ ಕುಮಾರ ಶೆಟ್ಟಿ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಅತ್ತೂರುಬೈಲು ವೆಂಕಟರಾಜ ಉಡುಪ, ವಾಸುದೇವ ಶಿಬರಾಯ, ವಿವಿಧ ಸೇವಾ ಕರ್ತರು, ಅತ್ತೂರು ಕೊಡೆತ್ತೂರು ಗ್ರಾಮಸ್ಥರು ಉಪಸ್ಥಿತರಿದ್ದರು.
ಅಂಕುರಾರೋಪಣ, ರಾಕ್ಷೆಘ್ನಹೋಮಗಳ ಬಳಿಕ ನಾಗ, ಬ್ರಹ್ಮ ಸನ್ನಿಧಿಗಳಲ್ಲಿ ವಾಸ್ತು ನಡೆಯಿತು. ಇಂದು ಬಿಂಬಶುದ್ಧಿಗಳು, ಹೊರಗಿನ ನಾಗ ಮತ್ತು ಬ್ರಹ್ಮ ಸನ್ನಿಧಿಗಳಲ್ಲಿ ಕಲಶಾಭಿಷೇಕ, ಗಣಪತಿ ಬಿಂಬಾಧಿವಾಸ, ಧ್ವಜಾಧಿವಾಸ, ರತ್ನನ್ಯಾಸ ಹೋಮ ನಡೆಯಲಿದೆ.
ಪೋಟೋ :
೧ ಕಟೀಲು ದೇವಸ್ಥಾನದಲ್ಲಿ ಅಷ್ಟಬಂಧ ಪ್ರಯುಕ್ತ ತೋರಣಮುಹೂರ್ತ ನಡೆಯಿತು.
೨ ಕದಿರೆ ಮರದಿಂದ ಮಾಡಿದ ಅರಣಿಯಿಂದ ಅಶ್ವತ್ಥದ ಕೆತ್ತೆಯನ್ನಿಟ್ಟು ಮಥನದ ಮೂಲಕ ಅಗ್ನಿಸೃಷ್ಟಿಯನ್ನು ಮಾಡಲಾಯಿತು.
೩. ಶ್ರೀ ದೇವರ ಮುಖರಂಗ ಮತ್ತು ಬಲಿ ಮೂರ್ತಿಗೆ ಅಗ್ನಿ ಉತ್ಥಾರಣ ಮಾಡಲಾಯಿತು.
IMG-20190123-WA0124 IMG-20190123-WA0126 IMG-20190123-WA0127

Post a Reply

Your email address will not be published. Required fields are marked *