Pages Menu
TwitterRssFacebook
Categories Menu

Posted by on Dec 12, 2017 in News | 0 comments

ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ – ಮಕ್ಕಳಿಗೆ ಬುದ್ದಿವಂತಿಕೆ ಮಾತ್ರವಲ್ಲ ಹೃದಯವಂತಿಕೆಯನ್ನೂ ಕಲಿಸಿ

ಹಿರಿಯ ಪ್ರಾಥಮಿಕ ಶಾಲಾ ವಾರ್ಷಿಕೋತ್ಸವ – ಮಕ್ಕಳಿಗೆ ಬುದ್ದಿವಂತಿಕೆ ಮಾತ್ರವಲ್ಲ ಹೃದಯವಂತಿಕೆಯನ್ನೂ ಕಲಿಸಿ

ವಾಟ್ಸಪ್‍ನಿಂದ ಒಳಿತೂ ಇದೆ. ಕೆಡುಕೂ ಇದೆ. ಮಕ್ಕಳಲ್ಲಿ ಮೊಬೈಲು ಬಳಕೆ ಅತಿಯಾಗದಂತೆ ಹೆತ್ತವರು ಗಮನಿಸಬೇಕು. ಬುದ್ದಿವಂತಿಕೆ ಮಾತ್ರವಲ್ಲ ಹೃದಯವಂತಿಕೆ ಬೇಕು. ನೀರಿನ ಬಳಕೆಯ ಜಾಗೃತಿ, ರಾಷ್ಟ್ರಪ್ರೇಮ ಮೂಡಿಸುವ ಅಗತ್ಯ ಇವತ್ತಿನ ಶಿಕ್ಷಣದ್ದು ಎಂದು ಪೆರ್ಮನ್ನೂರು ಸರಕಾರಿ ಪ್ರೌಢಶಾಲಾ ಶಿಕ್ಷಕಿ ವಿಜಯಲಕ್ಷ್ಮೀ ಕಟೀಲು ಹೇಳಿದರು.
ಅವರು ಕಟೀಲು ಶ್ರೀದುರ್ಗಾಪರಮೇಶ್ವರೀ ಪದವಿ ಪೂರ್ವ ಕಾಲೇಜಿನ ಶ್ರೀ ವಿದ್ಯಾ ಸದಸನದಲ್ಲಿ ಕಟೀಲು ಅನುದಾನಿತ ಶ್ರೀ ದುರ್ಗಾಪರಮೇಶ್ವರೀ ಹಿರಿಯ ಪ್ರಾಥಮಿಕ ಶಾಲೆ ಮತ್ತು ಶ್ರೀ ದುರ್ಗಾಪರಮೇಶ್ವರೀ ಇಂಗ್ಲಿಷ್ ಮಾಧ್ಯಮ ಪೂರ್ವ ಪ್ರಾಥಮಿಕ – ಕಿರಿಯ ಪ್ರಾಥಮಿಕ ಶಾಲೆ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯೋಗದಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿ ±್ರÉೀಯಾ, ಹಾಗೂ ಯೋಗ ಶಿಕ್ಷಕ ಹರಿರಾಜ ಶೆಟ್ಟಿಗಾರ್‍ರನ್ನು ಗೌರವಿಸಲಾಯಿತು.
ಅನುವಂಶಿಕ ಮೊಕ್ತೇಸರ ವಾಸುದೇವ ಆಸ್ರಣ್ಣ, ಅರ್ಚಕ ಶ್ರೀಹರಿನಾರಾಯಣದಾಸ ಆಸ್ರಣ್ಣ, ರಾಜಲಕ್ಷ್ಮೀ ಎಜುಕೇಷನಲ್ ಟ್ರಸ್ಟ್‍ನ ಸವಿತಾ ಚೌಟ, ಪದ್ಮನಾಭ ಭಟ್ ದಾವಣಗೆರೆ, ಉದ್ಯಮಿ ಗಿರೀಶ್ ಎಂ. ಶೆಟ್ಟಿ, ಸುಧೀರ್ ಶೆಟ್ಟಿ ಕೊಡೆತ್ತೂರುಗುತ್ತು, ಜಿ.ಪಂ. ಉಪಾಧ್ಯಕ್ಷೆ ಕಸ್ತೂರಿ ಪಂಜ, ಕಟೀಲು ಗ್ರಾಮ ಪಂಚಾಯತ್ ಅಧ್ಯಕ್ಷೆ ಗೀತಾ ಸುವರ್ಣ, ಉಪಾಧ್ಯಕ್ಷ ಕಿರಣ್ ಕುಮಾರ್ ಶೆಟ್ಟಿ, ತಾ. ಪಂ. ಸದಸ್ಯ ಸುಕುಮಾರ ಸನಿಲ್, ಮಾಜಿ ಜಿ. ಪಂ. ಸದಸ್ಯ ಈಶ್ವರ್ ಕಟೀಲು, ಕಟೀಲು ಸ್ಪೋಟ್ಸ್ ಕ್ಲಬ್ ಅಧ್ಯಕ್ಷ ಕೇಶವ ಕಟೀಲು, ಉದ್ಯಮಿ ಅಭಿಲಾಷ್ ಶೆಟ್ಟಿ, ಪ್ರವೀಣ್ ಕುಮಾರ್ ಕಟೀಲು, ಶಾಲಾ ಸಮಿತಿಯ ವೆಂಕಟರಮಣ ಹೆಗಡೆ, ಪ್ರಸನ್ನ ರಾವ್, ಧನ್ಯಶ್ರೀ, ಮುಖ್ಯ ಶಿಕ್ಷಕಿ ವಿಜಯಲಕ್ಷ್ಮೀ ರಾವ್, ಮುಖ್ಯೋಪಾಧ್ಯಾಯಿನೀ ಸರೋಜಿನಿ ಮತ್ತಿತರರಿದ್ದರು. ಚಂದ್ರ ಶೇಖರ್ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

123456

Post a Reply

Your email address will not be published. Required fields are marked *