Pages Menu
TwitterRssFacebook
Categories Menu

Posted by on Apr 20, 2017 in News | 0 comments

20 ಗ್ರಾಮಗಳಿಗೆ ಸ್ವಚ್ಛ ಕಟೀಲು ಯೋಜನೆ ತಾ. 22ಕ್ಕೆ ಕಾರ್ಯಗಾರ

ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ ಮತ್ತು ಮುಂಬೈನ ಸಂಜೀವನಿ ಚಾರಿಟೇಬಲ್ ಟ್ರಸ್ಟ್ ಇವರ ಸಹಭಾಗಿತ್ವದಲ್ಲಿ ಕಟೀಲಿನ ಆಸುಪಾಸಿನ 9ಗ್ರಾಮ ಪಂಚಾಯತ್‍ಗಳ 20ಗ್ರಾಮಗಳನ್ನು ಕೇಂದ್ರವಾಗಿರಿಸಿ ಸ್ವಚ್ಛ ಕಟೀಲು ಯೋಜನೆ ಜಾರಿಗೊಳ್ಳಲಿದೆ. ಈ ಹಿನ್ನಲೆಯಲ್ಲಿ ಎಪ್ರಿಲ್ 22ರಂದು ಶನಿವಾರ ಮಧ್ಯಾಹ್ನ 2.30ಕ್ಕೆ ಕಟೀಲು ಪದವಿಪೂರ್ವ ಕಾಲೇಜಿನಲ್ಲಿ ವಿಚಾರ ವಿನಿಮಯ ಹಾಗೂ ಪ್ರಾತ್ಯಕ್ಷಿಕೆ ಕಾರ್ಯಾಗಾರ ನಡೆಯಲಿದೆ. ಕೆಎಂಸಿಯ ಡಾ. ಉಣ್ಣಿಕೃಷ್ಣನ್, ಟಾಟಾ ಸ್ಟೀಲ್ಸ್ ಇಂಡಸ್ಟ್ರೀಸ್‍ನ ಸಾಯಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದು, ಶಾಸಕ ಅಭಯಚಂದ್ರ, ಸಾಂಸದ ನಳಿನ್ ಕುಮಾರ್, ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಎಂ. ಆರ್. ರವಿ, ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಸದಸ್ಯರು, ಗ್ರಾಮಪಂಚಾಯತ್‍ಗಳ ಅಧ್ಯಕ್ಷರು, ಸದಸ್ಯರು ಭಾಗವಹಿಸಲಿದ್ದಾರೆ ಎಂದು ಸಂಜೀವನಿ ಟ್ರಸ್ಟ್‍ನ ಡಾ. ಸುರೇಶ್ ರಾವ್ ತಿಳಿಸಿದ್ದಾರೆ.
ಕಟೀಲು, ಮೆನ್ನಬೆಟ್ಟು, ಕೆಮ್ರಾಲ್, ಕಿನ್ನಿಗೋಳಿ, ಐಕಳ, ಬಳ್ಕುಂಜೆ, ಕಲ್ಲಮುಂಡ್ಕೂರು, ಎಕ್ಕಾರು, ಸೂರಿಂಜೆ ಗ್ರಾಮಪಂಚಾಯತ್‍ಗಳ ಇಪ್ಪತ್ತು ಗ್ರಾಮಗಳು ಈ ಯೋಜನೆಯಡಿ ಬರಲಿದ್ದು, ಕಟೀಲಿನಲ್ಲಿ ನೂತನವಾಗಿ 25ಕೋಟಿ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಂಜೀವನಿ ಚಾರಿಟೇಬಲ್ ಆಸ್ಪತ್ರೆಯ ಸವಲತ್ತುಗಳನ್ನು ಈ ಗ್ರಾಮಗಳು ಪಡೆಯಲಿವೆ.

Post a Reply

Your email address will not be published. Required fields are marked *