Pages Menu
TwitterRssFacebook
Categories Menu

News


Special Programs in Shri Durgaparameshwari Temple
(ಶ್ರೀ ದೇವೀ ಸನ್ನಿಧಿಯಲ್ಲಿ ವಿಶೇಷ ಕಾರ್ಯಕ್ರಮಗಳು)


Golden Cahariot, Kudru Development and Paper Free office
(ಕಟೀಲು: ಚಿನ್ನದ ರಥಕ್ಕೆ ಸ್ವರ್ಣ ಮುಹೂರ್ತ,ಕಟೀಲು: ಮೂಲಸ್ಥಳ ಅಭಿವೃದ್ಧಿಗೆ ಚಾಲನೆ,ಕಾಗದ ರಹಿತ ಕಚೇರಿ ಉದ್ಘಾಟನೆ)


news1 news2
news3

    ಕಟೀಲು ಶ್ರೀದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ 5 ಕೋ.ರೂ.ವೆಚ್ಚದ ಚಿನ್ನದ ರಥ ನಿರ್ಮಾಣಕ್ಕೆ ಸ್ಬರ್ಣಮುಹೂರ್ತ, 5 ಕೋ.ರೂ. ವೆಚ್ಚದಲ್ಲಿ ಮೂಲಸ್ಥಳ ಅಭಿವೃದ್ಧಿ ಕಾಮಗಾರಿಗೆ ಚಾಲನೆ ಮತ್ತು ಕಾಗದರಹಿತ ಕಚೇರಿ ಉದ್ಘಾಟನೆಯು ರವಿವಾರ ದಿನಾಂಕ 25.08.2013 ರಂದು ದೇವಳ ವಠಾರದಲ್ಲಿ ನೆರವೇರಿತು.ಅರಣ್ಯ ಹಾಗೂ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಚಿನ್ನದ ರಥಕ್ಕೆ ಸ್ವರ್ಣಮುಹೂರ್ತ ನೆರವೇರಿಸಿದರು. ನಗರಾಭಿವೃದ್ಧಿ ಸಚಿವ ವಿನಯಕುಮಾರ್ ಸೊರಕೆ ಮೂಲಸ್ಥಳ ಅಭಿವೃದ್ಧಿ ಕಾಮಗಾರಿ ಉದ್ಘಾಟಿಸಿದರು.ಆರೋಗ್ಯ ಸಚಿವ ಯು.ಟಿ.ಖಾದರ್ ಕಾಗದ ರಹಿತ ಕಚೇರಿಯನ್ನುಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕೆ ಮತ್ತು ಯುವಜನ ಕ್ರೀಡಾ ಸಚಿವ ಅಭಯಚಂದ್ರ ಜೈನ್ ಮಾತನಾಡಿ, ಕೊಲ್ಲೂರು ಸುಬ್ರಹ್ಮಣ್ಯಗಳಲ್ಲಿ ಇರುವಂತೆ ಕಟೀಲಿನಲ್ಲಿ 4 ಕೋಟಿ ರೂ. ವೆಚ್ಚದಲ್ಲಿ ಯಾತ್ರಿನಿವಾಸ ನಿರ್ಮಾಣವಾಗಲಿದೆ ಎಂದು ಹೇಳಿದರು.

 

          ಮುಂಬಯಿಯ ಸಂಜೀವನೀ ಟ್ರಸ್ಟ್ ಅಧ್ಯಕ್ಷ ಕಟೀಲಿನ ಡಾ| ಸುರೇಶ್ ರಾವ್ ಅವರು ಕಟೀಲಿನಲ್ಲಿ ಕಂದಾಯ ಇಲಾಖೆಯಿಂದ ನಿವೇಶನ ಲಭಿಸಿದಲ್ಲಿ 100 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಮಾಡಲು ಮುಂದಾಗಿದ್ದು ಪೂರಕ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಸಚಿವಯು.ಟಿ. ಖಾದರ್ ಹೇಳಿದರು. ವಿನಯಕುಮಾರ್ ಸೊರಕೆ ಮಾತನಾಡಿ ಗ್ರೇಟರ್ ಮಂಗಳೂರು ಯೋಜನೆಯಡಿ ಉಳ್ಳಾಲ, ಬಜಪೆ, ಮೂಲ್ಕಿಯ ಪ್ರದೇಶಗಳು ಅಭಿವೃದ್ಧಿಯಾಗಲಿದ್ದು ಅದರಡಿ ಕಟೀಲನ್ನೂ ಅಭಿವೃದ್ಧಿಪಡಿಸಲಾಗುವುದು ಎಂದರು ಆಡಳಿತಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಎಸ್.,ಆನುವಂಶಿಕ ಮೊಕ್ತೇಸರ ಕೆ.ವಾಸುದೇವಆಸ್ರಣ್ಣ, ಅರ್ಚಕ ವೆಂಕಟರಮಣ ಆಸ್ರಣ್ಣ, ಡಿ.ವಿ.ಸದಾನಂದಗೌಡ, ಮೊದಿನ್ ಬಾವಾ, ಕ್ಯಾ| ಗಣೇಶ್ಕಾರ್ಣಿಕ್, ಮೋನಪ್ಪಭಂಡಾರಿ, ದಯಾನಂದರೆಡ್ಡಿ, ಐಕಳ ಹರೀಶ್ ಶೆಟ್ಟಿ, ಸತೀಶ್ ಶೆಟ್ಟಿ, ತಾಲೂಕು ಪಂಚಾಯತ್ ಸದಸ್ಯೆ ಬೇಬಿ ಸುಂದರ ಕೋಟ್ಯಾನ್, ಮೆನ್ನಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷ ಜನಾರ್ಧನ ಕಿಲೆಂಜೂರು, ಉಡುಪಿಯ ಸ್ವರ್ಣ ಸಂಸ್ಥೆಯ ರಾಮದಾಸನಾಯಕ್, ವಾಸುತಜ್ಞ ಸುಬ್ರಹ್ಮಣ್ಯ ಭಟ್, ರಥದ ಶಿಲ್ಪಿ ಸುದರ್ಶನ ಆಚಾಯರ್ಯ ಉಪಸ್ಥಿತರಿದ್ದರು ಆಡಳಿತಾಧಿಕಾರಿ ಅಜಿತ್ ಕುಮಾರ್ ಹೆಗ್ಡೆ ಎಸ್ ಸ್ವಾಗತಿಸಿದರು.ಪ್ರಾಚಾರ್ಯ ಪ್ರೊ| ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಅನಂತಪದ್ಮನಾಭ ಆಸ್ರಣ್ಣ ವಂದಿಸಿದರು.

 

ಆರನೇ ಮೇಳಕ್ಕೆ ಚಾಲನೆ


mela5

    ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಿಂದ ನಡೆಸಲ್ಪಡುವ ಯಕ್ಷಗಾನ ಮೇಳದ ತಿರುಗಾಟವು ಈ ವರ್ಷ ನವಂಬರ್ 7 ರಿಂದ ಆರಂಭವಾಗಲಿದ್ದು, ಈ ವರ್ಷ 6 ನೇ ಮೇಳಗಳ ತರುಗಾಟ ಆರಂಭಿಸಲಿದೆ. ಈಗಾಗಲೇ 8000 ಭಕ್ತರು ಯಕ್ಷಗಾನ ಸೇವೆಯನ್ನು ಮುಂಗಡ ಕಾದಿರಿಸಿದ್ದಾರೆ. ಒಟ್ಟು 450 ಯಕ್ಷಗಾನ ಪ್ರದರ್ಶನಗಳು ಪ್ರತಿ ವರ್ಷ ಸೇವೆ ನಡೆಸುವವುಗಳು ಆಗಿರುವುದರಿಂದ ವಾರ್ಷಿಕ ಸರಾಸರಿ 550 ಯಕ್ಷಗಾನಗಳು ಮಾತ್ರ ವರಿಗೆ ನೀಡಲಾಗುತ್ತಿತ್ತು. ಇದರಿಂದ ಭಕ್ತರು ಹಲವಾರು ವರ್ಷಗಳ ಕಾಲ ಕಾಯುವ ಸಮಸ್ಯೆ ಇದೆ. ಇದನ್ನು ನಿವಾರಿಸಲು ಆರನೇ ಮೇಳ ಆರಂಭವಾಗಿರುವುದರಿಂದ ವರ್ಷದಿಂದ ಹೆಚ್ಚಿನ ಯಕ್ಷಗಾನಗಳು ಪ್ರದರ್ಶನಗೊಳ್ಳಲಿದ್ದು ಭಕ್ತರಿಗೆ ಪ್ರಯೋಜನವಾಗಲಿದೆ. ಇದರಿಂದಾಗಿ ಈಗ ಕಾದಿರಿಸಿದ ಭಕ್ತರಿಗೆ ಹತ್ತು ವರ್ಷಗಳೊಳಗೆ ಯಕ್ಷಗಾನ ಆಡಿಸಲು ಸಾಧ್ಯವಾಗುತ್ತದೆ ಎಂದು ಆಡಳಿತ ಮಂಡಳಿಯು ತಿಳಿಸಿದೆ. ಪತ್ರಿಕಾಗೋಷ್ಠಿಯಲ್ಲಿ ದೇವಳದ ಆಡಳಿತಾಧಿಕಾರಿಗಳಾದ ಅಜಿತ್ ಕುಮಾರ್ ಹೆಗ್ಡೆ ಎಸ್, ಆನುವಂಶಿಕ ಮೊಕ್ತೇಸರರಾದ ವಾಸುದೇವ ಆಸ್ರಣ್ಣ, ಅರ್ಚಕರಾದ ಲಕ್ಷ್ಮೀನಾರಾಯಣ ಆಸ್ರಣ್ಣ, ಶ್ರೀಹರಿನಾರಾಯಣದಾಸ ಆಸ್ರಣ್ಣ, ಕಮಲಾದೇವಿಪ್ರಸಾದ ಆಸ್ರಣ್ಣ ಮತ್ತು ದೇವಿಕುಮಾರ ಆಸ್ರಣ್ಣ ಉಪಸ್ಥಿತರಿದ್ದರು.

 

ಭಕ್ತಾದಿಗಳಿಗೆ ಕಟೀಲಿನಲ್ಲಿ ಮಳೆಗಾಲದಲ್ಲಿ ಯಕ್ಷಗಾನ ಸೇವಾ ಸೌಲಭ್ಯ,ಕಾಲಮಿತಿಯ ಯಕ್ಷಗಾನ


news5

    ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದಲ್ಲಿ ಯಕ್ಷಗಾನ ಸೇವೆಯನ್ನು ಮಳೆಗಾಲದಲ್ಲಿಯೂ ಮಾಡುವ ಬಗ್ಗೆ ದೇವರ ಅಪ್ಪಣೆ ಬಂದಿರುತ್ತದೆ. ದಿನಾಂಕ 29.08.2013 ರಂದು ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಮೊಸರುಕುಡಿಕೆ ಯಕ್ಷಗಾನ ಸೇವಾ ಬಯಲಾಟದ ಸಂದರ್ಭ ಊರ ಪ್ರಮುಖರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ದೇವರ ಸಾನ್ನಿಧ್ಯದಲ್ಲಿ ಹೂಪ್ರಶ್ನೆ ಮೂಲಕ ಪ್ರಾರ್ಥಿಸಲಾಗಿ ದೇವರ ಅಪ್ಪಣೆ ಬಂದಿರುತ್ತದೆ. ಮಳೆಗಾಲದ ಯಕ್ಷಗಾನ ಪ್ರದರ್ಶನ ಶ್ರೀ ಕ್ಷೇತ್ರ ಕಟೀಲಿನಲ್ಲಿ ಮಾತ್ರ ನಡೆಯಲಿದ್ದು ನವರಾತ್ರಿಯ ಮೊದಲ ದಿನ ಮುಕ್ತಾಯವಾಗಲಿದೆ. ಈ ಪ್ರದರ್ಶನವು ಸಾಯಂ. ಗಂಟೆ 6.00 ರಿಂದ ರಾತ್ರಿ 12 ರ ತನಕ ನಡೆಯಲಿದೆ. ಈ ಯಕ್ಷಗಾನ ಸೇವೆಯನ್ನು ಆಡಿಸುವವರು ಮುಂಗಡವಾಗಿ ಕಾದಿರಿಸಬಹುದು ಎಂದು ದೇವಳದ ಪ್ರಕಟಣೆ ತಿಳಿಸಿದೆ.


Fatal error: Call to undefined function the_event_start_date() in /home/kateerez/public_html/wp-content/themes/Lucid/page.php on line 12